ಗುಪ್ತರ ಸಾಮ್ರಾಜ್ಯ(ಕ್ರಿ.ಶ. 320 – ಕ್ರಿ.ಶ. 550)
- ಕ್ರಿ.ಶ. ೪ ರಿಂದ ೫ ನೆಯ ಶತಮಾನದಲ್ಲಿ , ಗುಪ್ತರ ಆಡಳಿತದಲ್ಲಿ, ಸಂಪೂರ್ಣ ಉತ್ತರಭಾರತವು ಒಂದುಗೂಡಿತು. ಸುವರ್ಣ ಯುಗವೆಂದೇ ಹೆಸರಾದ ಈ ಕಾಲದಲ್ಲಿ, ಹಿಂದೂ ಸಂಸ್ಕೃತಿ, ವಿಜ್ಞಾನ ಮತ್ತು ರಾಜನೈತಿಕ ಆಡಳಿತಗಳು ಪ್ರವರ್ಧಮಾನವಾದವು.
- ಗುಪ್ತರ ಮೂಲ ಅಸ್ಪಷ್ಟವಾಗಿದ್ದರೂ, ಚೀನಾದ ಪ್ರವಾಸಿ ಇ ತ್ಸಿಂಗನ ದಾಖಲೆಗಳಲ್ಲಿ ಮಗಧದ ಗುಪ್ತ ರಾಜ್ಯದ ಬಗ್ಯೆ ಮೊದಲ ಕರುಹುಗಳು ಕಾಣಬರುತ್ತವೆ.
- ಪುರಾಣಗಳು ಈ ಕಾಲದಲ್ಲಿಯೇ ಬರೆಯಲ್ಪಟ್ಟವೆಂದು ನಂಬಲಾಗಿದೆ. ಮಧ್ಯ ಏಶಿಯಾದ ಹೂಣರ ಧಾಳಿಯಿಂದ ಗುಪ್ತರ ಸಾಮ್ರಾಜ್ಯ ಪತನವಾಯಿತು. ಇದರ ನಂತರವೂ, ಗುಪ್ತ ಕುಲದ ಸೋದರಸಂಬಂಧಿ ವಂಶವೊಂದು ಮಗಧವನ್ನು ಆಳುತ್ತಿದ್ದು, ಮುಂದೆ ಗುಪ್ತ ಸಾಮ್ರಾಜ್ಯದಷ್ಟೇ ವಿಶಾಲವಾದ ರಾಜ್ಯವನ್ನು ಕಟ್ಟಿ ಆಳಿದ , ಹರ್ಷ ವರ್ಧನನಿಂದ ಸೋಲಿಸಲ್ಪಟ್ಟು ಅವನತಿ ಹೊಂದಿತು.
ಶ್ರೀ ಗುಪ್ತ (ಕ್ರಿ.ಶ. 240– ಕ್ರಿ.ಶ. 280) ಮತ್ತು ಘಟೋತ್ಕಚ (ಕ್ರಿ.ಶ. 280– ಕ್ರಿ.ಶ. 319)
- ಶ್ರೀ ಗುಪ್ತನ ಆಳ್ವಿಕೆಯ ಅತ್ಯಂತ ಸಂಭಾವ್ಯ ಕಾಲ ಕ್ರಿ.ಶ. ೨೪೦-೨೮೦. ಕುಶಾಣರ ಊಳಿಗಮಾನ್ಯ ಅಧಿಪತಿಗಳಾಗಿದ್ದ ಮುರುಂಡರು ಶ್ರೀಗುಪ್ತನಿಗೆ ಜಮೀನು ಒದಗಿಸಿದರು ಅಥವಾ ಕೊಟ್ಟರು.
- ಯೀಜಂಗ್ ತನ್ನ ಬರಹಗಳಲ್ಲಿ ಶ್ರೀ ಗುಪ್ತನ ಬಗ್ಗೆ ಉಲ್ಲೇಖಿಸಿದ್ದಾನೆ.
- ಅವನ ಮಗ ಮತ್ತು ಉತ್ತರಾಧಿಕಾರಿ ಘಟೋತ್ಕಚನು ಸಂಭಾವ್ಯವಾಗಿ ಕ್ರಿ.ಶ. ೨೮೦-೩೧೦ ರ ವರೆಗೆ ಆಳಿದನು. ಅವನು ಇತರ ಊಳಿಗಮಾನ್ಯ ಅಧಿಪತಿಗಳಿಗೆ ಸವಾಲೊಡ್ಡಿ ಅವರ ನಾಡನ್ನು ವಶಪಡಿಸಿಕೊಂಡನು.
- ೪ನೇ ಶತಮಾನದ ಆರಂಭದಲ್ಲಿ, ಗುಪ್ತರು ಮಗಧ ಮತ್ತು ಆಧುನಿಕ ಬಿಹಾರ್‍ನ ಸುತ್ತಮುತ್ತ ಕೆಲವು ಸಣ್ಣ ಹಿಂದೂ ರಾಜ್ಯಗಳನ್ನು ಸ್ಥಾಪನೆ ಮಾಡಿ ಆಳುತ್ತಿದ್ದರು.
ಮೊದಲನೇ ಚಂದ್ರಗುಪ್ತ (ಕ್ರಿ.ಶ. 320– ಕ್ರಿ.ಶ. 335)
- ಘಟೋತ್ಕಚನಿಗೆ (ಆಳ್ವಿಕೆ ಕಾಲ ಕ್ರಿ.ಶ. 280–319) ಚಂದ್ರಗುಪ್ತನೆಂಬ ಮಗನಿದ್ದನು (ಆಳ್ವಿಕೆ ಕಾಲ ಕ್ರಿ.ಶ. 320–335). ಒಂದು ಪ್ರಮುಖ ಒಪ್ಪಂದದಲ್ಲಿ, ಚಂದ್ರಗುಪ್ತನು ಲಿಚ್ಛವಿ ರಾಜಕುಮಾರಿ ಕುಮಾರಾದೇವಿಯನ್ನು ವಿವಾಹವಾದನು. ಲಿಚ್ಛವಿಯರು ಮಗಧದಲ್ಲಿ ಮುಖ್ಯ ಅಧಿಕಾರ ಬಿಂದುವಾಗಿದ್ದರು.
- ವರದಕ್ಷಿಣೆಯಲ್ಲಿ ಮಗಧ ರಾಜ್ಯವನ್ನು (ರಾಜಧಾನಿ ಪಾಟಲಿಪುತ್ರ) ಪಡೆದುಕೊಂಡು ಮತ್ತು ನೇಪಾಳದ ಲಿಚ್ಛವಿಯರೊಂದಿಗೆ ಮೈತ್ರಿ ಮಾಡಿಕೊಂಡು, ಚಂದ್ರಗುಪ್ತನು ತನ್ನ ಅಧಿಕಾರವನ್ನು ವಿಸ್ತರಿಸಲು ಆರಂಭಿಸಿದನು, ಮತ್ತು ಮಗಧ, ಪ್ರಯಾಗ ಹಾಗೂ ಸಾಕೇತದ ಬಹಳಷ್ಟನ್ನು ವಶಪಡಿಸಿಕೊಂಡನು.
- ೩೨೧ರ ಹೊತ್ತಿಗೆ ಅವನು ಗಂಗಾ ನದಿಯಿಂದ ಪ್ರಯಾಗದವರೆಗಿನ ವಿಸ್ತಾರದ ಸಾಮ್ರಾಜ್ಯವನ್ನು ಸ್ಥಾಪಿಸಿದನು. ಅವನು ಮಹಾರಾಜಾಧಿರಾಜ ಎಂಬ ಸಾಮ್ರಾಜ್ಯ ಬಿರುದನ್ನು ಸ್ವೀಕರಿಸಿದನು. ಅವನು ವಿವಾಹ ಮೈತ್ರಿಗಳ ಮೂಲಕ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿದನು.
ಸಮುದ್ರಗುಪ್ತ (ಕ್ರಿ.ಶ. 335– ಕ್ರಿ.ಶ. 380)
- ಸಮುದ್ರಗುಪ್ತನು, ಪರಾಕ್ರಮಾಂಕ ೩೩೫ರಲ್ಲಿ ತನ್ನ ತಂದೆಯ ಉತ್ತರಾಧಿಕಾರಿಯಾಗಿ ೪೫ ವರ್ಷಗಳ ಕಾಲ ಆಳಿದನು, ೩೮೦ರಲ್ಲಿ ಅವನ ಮರಣದವರೆಗೆ. ಅವನು ತನ್ನ ಆಳ್ವಿಕೆಯ ಆರಂಭದಲ್ಲಿ ಅಹಿಚ್ಛತ್ರ ಮತ್ತು ಪದ್ಮಾವತಿ ರಾಜ್ಯಗಳನ್ನು ತೆಗೆದುಕೊಂಡನು.
- ನಂತರ ಅವನು ಪ್ರದೇಶದಲ್ಲಿ ಬುಡಕಟ್ಟುಗಳಾಗಿದ್ದ ಮಾಲ್ವರು, ಯೌಧೇಯರು, ಆರ್ಜುನಾಯನರು, ಮದುರರು ಮತ್ತು ಆಭೀರರನ್ನು ಆಕ್ರಮಣ ಮಾಡಿದನು.
- ೩೮೦ರಲ್ಲಿ ತನ್ನ ಮರಣದ ವೇಳೆಗೆ, ಅವನು ತನ್ನ ಸಾಮ್ರಾಜ್ಯದಲ್ಲಿ ಇಪ್ಪತ್ತು ರಾಜ್ಯಗಳನ್ನು ಸೇರಿಸಿಕೊಂಡಿದ್ದನು ಮತ್ತು ಅವನ ಆಳ್ವಿಕೆ ಹಿಮಾಲಯದಿಂದ ನರ್ಮದಾ ನದಿವರೆಗೆ ಮತ್ತು ಬ್ರಹ್ಮಪುತ್ರದಿಂದ ಯಮುನಾವರೆಗೆ ವಿಸ್ತರಿಸಿತ್ತು.
- ಅವನು ತನಗೆ ರಾಜಾಧಿರಾಜ ಮತ್ತು ವಿಶ್ವಾಧೀಶ್ವರನೆಂಬ ಬಿರುದುಗಳನ್ನು ಕೊಟ್ಟುಕೊಂಡನು. ಅವನು ಅಶ್ವಮೇಧ ಯಾಗವನ್ನು ಮಾಡಿದನು. ಆ ಕುದುರೆಯ ಕಲ್ಲಿನ ಪ್ರತಿಕೃತಿ ಲಖ್ನೋ ಸಂಗ್ರಹಾಲಯದಲ್ಲಿದೆ.
- ಅಶೋಕನ್ ಸ್ತಂಭದ ಮೇಲೆ ಕೆತ್ತಲಾಗಿರುವ ಸಮುದ್ರಗುಪ್ತ ಪ್ರಶಸ್ತಿಯು ಅವನ ವೀರಕೃತ್ಯಗಳ ಮತ್ತು ಉಪಖಂಡದ ಬಹುತೇಕ ಭಾಗದ ಮೇಲೆ ಅವನ ಪ್ರಭಾವದ ಅಧಿಕೃತ ದಾಖಲೆಯಾಗಿದೆ. ಈ ಸ್ತಂಭ ಅಲಾಹಾಬಾದ್‍ನ ಅಕ್ಬರ್ ಕೋಟೆಯಲ್ಲಿದೆ.
- ಸಮುದ್ರಗುಪ್ತನು ಪ್ರತಿಭಾವಂತ ಸೇನಾ ನಾಯಕನಷ್ಟೇ ಅಲ್ಲದೇ ಕಲೆ ಮತ್ತು ಸಾಹಿತ್ಯದ ಮಹಾನ್ ಪೋಷಕನಾಗಿದ್ದನು. ಅವನು ಕಾಶ್ಮೀರ ಮತ್ತು ಅಫ಼್ಘಾನಿಸ್ತಾನವನ್ನು ಜಯಗಳಿಸಿ ಸಾಮ್ರಾಜ್ಯವನ್ನು ವಿಸ್ತರಿಸಿದನು.
- ಹರಿಶೇಣ, ವಸುಬಂಧು ಮತ್ತು ಅಸಂಗ ಇವನ ಆಸ್ಥಾನದಲ್ಲಿ ಉಪಸ್ಥಿತರಿದ್ದ ವಿಮರ್ಶನಶೀಲ ವಿದ್ವಾಂಸರಾಗಿದ್ದರು. ಅವನು ಸ್ವತಃ ಕವಿ ಮತ್ತು ಸಂಗೀತಗಾರನಾಗಿದ್ದನು. ಅವನು ಹಿಂದೂ ಧರ್ಮದಲ್ಲಿ ದೃಢ ನಂಬಿಕೆಯುಳ್ಳವನಾಗಿದ್ದನು ಮತ್ತು ವಿಷ್ಣುವನ್ನು ಆರಾಧಿಸುತ್ತಿದ್ದನೆಂದು ತಿಳಿದುಬಂದಿದೆ.
- ಅವನು ಇತರ ಧರ್ಮಗಳ ಬಗ್ಗೆ ದಾಕ್ಷಿಣ್ಯಪರನಾಗಿದ್ದನು ಮತ್ತು ಶ್ರೀಲಂಕಾದ ಬೌದ್ಧ ರಾಜ ಸಿರಿಮೇಘವನ್ನನಿಗೆ ಬೋಧ್ ಗಯಾದಲ್ಲಿ ಮಠವನ್ನು ಕಟ್ಟಲು ಅನುಮತಿ ನೀಡಿದನು. ಆ ಮಠವನ್ನು ಕ್ಸುವಾನ್‍ಜ಼್ಯಾಂಗ್ ಮಹಾಬೋಧಿ ಸಂಘರಾಮವೆಂದು ಕರೆದನು. ಅವನು ಬೋಧಿ ವೃಕ್ಷದ ಸುತ್ತ ಚಿನ್ನದ ಕಟಾಂಜನವನ್ನು ಒದಗಿಸಿದನು.
ಸಮುದ್ರಗುಪ್ತನನ್ನು ಭಾರತದ್ "ನೆಪೋಲಿಯನ್" ಎಂದು ಕರಿಯುತ್ತಾರೆ.
ರಾಮಗುಪ್ತ (ಕ್ರಿ.ಶ. 380)
- ದೇವಿಚಂದ್ರಗುಪ್ತದ ಕಥೆ ಯಾವುದೇ ಸಮಕಾಲೀನ ಶಾಸನಶಾಸ್ತ್ರ ಸಾಕ್ಷ್ಯಾಧಾರದಿಂದ ಬೆಂಬಲಿತವಾಗಿಲ್ಲವಾದರೂ, ರಾಮಗುಪ್ತನ ಐತಿಹಾಸಿಕತೆ ಮೂರು ಜೈನ ವಿಗ್ರಹಗಳ ಮೇಲೆ ಅವನ ದುರ್ಜನ್‍ಪುರ್ ಶಾಸನಗಳಿಂದ ಸಾಬೀತಾಗುತ್ತದೆ, ಇವುಗಳಲ್ಲಿ ಅವನನ್ನು ಮಹಾರಾಜಾಧಿರಾಜ ಎಂದು ಉಲ್ಲೇಖಿಸಲಾಗಿದೆ.
- ಅವನ ದೊಡ್ಡ ಸಂಖ್ಯೆಯ ತಾಮ್ರದ ನಾಣ್ಯಗಳು ಎಯ್ರಣ್-ವಿದೀಷಾ ಪ್ರದೇಶದಿಂದ ಸಿಕ್ಕಿವೆ ಮತ್ತು ಇವನ್ನು ಐದು ವಿಶಿಷ್ಟ ಪ್ರಕಾರಗಳಲ್ಲಿ ವರ್ಗೀಕರಿಸಲಾಗಿದೆ, ಇದರಲ್ಲಿ ಗರುಡ, ಗರುಡಧ್ವಜ, ಸಿಂಹ ಮತ್ತು ಅಂಚಿನ ಆಲೇಖ ಪ್ರಕಾರಗಳು ಸೇರಿವೆ.
- ಈ ನಾಣ್ಯಗಳ ಮೇಲಿನ ಬ್ರಾಹ್ಮಿ ಆಲೇಖಗಳನ್ನು ಮುಂಚಿನ ಗುಪ್ತ ಶೈಲಿಯಲ್ಲಿ ಬರೆಯಲಾಗಿದೆ. ವಿದ್ವಾಂಸರ ಅಭಿಪ್ರಾಯದಲ್ಲಿ, ರಾಮಗುಪ್ತನು ಸಮುದ್ರಗುಪ್ತನ ಹಿರಿಯ ಮಗನಾಗಿರಬಹುದು. ಅತ್ಯಂತ ಹಿರಿಯನಾದ್ದರಿಂದ ರಾಜನಾದನು. ಆಳಲು ಸಾಕಷ್ಟು ಯೋಗ್ಯನಲ್ಲದ ಕಾರಣ ಪದಚ್ಯುತಿಗೊಂಡ ಸಾಧ್ಯತೆಗಳಿರಬಹುದು ಮತ್ತು ಹಾಗಾಗಿ ಅವನ ತಮ್ಮ ಎರಡನೇ ಚಂದ್ರಗುಪ್ತ ಅಧಿಕಾರ ಸ್ವೀಕರಿಸಿದನು.
ಎರಡನೇ ಚಂದ್ರಗುಪ್ತ "ವಿಕ್ರಮಾದಿತ್ಯ" (ಕ್ರಿ.ಶ. 380– ಕ್ರಿ.ಶ. 413/415)
- ಗುಪ್ತರ ದಾಖಲೆಗಳ ಪ್ರಕಾರ, ತನ್ನ ಪುತ್ರರಲ್ಲಿ, ಸಮುದ್ರಗುಪ್ತನು ರಾಣಿ ದತ್ತದೇವಿಗೆ ಜನಿಸಿದ ರಾಜಕುಮಾರ ಎರಡನೇ ಚಂದ್ರಗುಪ್ತನನ್ನು ತನ್ನ ಉತ್ತರಾಧಿಕಾರಿಯಾಗಿ ನೇಮಕ ಮಾಡಿದನು.
- ಎರಡನೇ ಚಂದ್ರಗುಪ್ತನು ೩೭೫ ರಿಂದ ೪೧೫ ರ ವರೆಗೆ ಆಳಿದನು. ಅವನು ಕುಂತಲದ ಕದಂಬ ರಾಜಕುಮಾರಿ ಮತ್ತು ನಾಗಕುಲದ ಕುಬೇರನಾಗನ ಮಗಳನ್ನು ವಿವಾಹವಾದನು. ಈ ನಾಗಕುಲದ ರಾಣಿಯಿಂದ ಜನಿಸಿದ ಮಗಳು ಪ್ರಭಾವತಿಗುಪ್ತಳು ದಖ್ಖನದ ವಾಕಾಟಕ ದೊರೆ ಎರಡನೇ ರುದ್ರಸೇನನನ್ನು ವಿವಾಹವಾದಳು.
- ಅವನ ಮಗ ಮೊದಲನೇ ಕುಮಾರಗುಪ್ತನು ಕರ್ನಾಟಕ ಪ್ರದೇಶದ ಕದಂಬ ರಾಜಕುಮಾರಿಯನ್ನು ವಿವಾಹವಾದನು.
- ಎರಡನೇ ಚಂದ್ರಗುಪ್ತನು ತನ್ನ ಸಾಮ್ರಾಜ್ಯವನ್ನು ಪಶ್ಚಿಮದ ಕಡೆ ವಿಸ್ತರಿಸಿ ಮಾಲ್ವಾ, ಗುಜರಾತ್ ಮತ್ತು ಸೌರಾಷ್ಟ್ರದ ಶಕ ಪಶ್ಚಿಮ ಕ್ಷತ್ರಪರನ್ನು ೪೦೯ರ ವರೆಗೆ ನಡೆದ ಯುದ್ಧದಲ್ಲಿ ಸೋಲಿಸಿದನು.
- ಇವನ ಮುಖ್ಯ ಎದುರಾಳಿ ಮೂರನೇ ರುದ್ರಸಿಂಹನು ೩೯೫ರ ವೇಳೆಗೆ ಪರಾಜಿತಗೊಂಡಿದ್ದನಾದ್ದರಿಂದ ವಂಗದ ಮುಖ್ಯಸ್ಥರನ್ನು ಸದೆಬಡಿದನು. ಇದರಿಂದ ಅವನ ಹಿಡಿತ ತೀರದಿಂದ ತೀರಕ್ಕೆ ವಿಸ್ತರಿಸಿತು, ಮತ್ತು ಉಜ್ಜೈನ್‍ನಲ್ಲಿ ಎರಡನೇ ರಾಜಧಾನಿಯನ್ನು ಸ್ಥಾಪಿಸಿದನು, ಇದು ಸಾಮ್ರಾಜ್ಯದ ಉನ್ನತ ಬಿಂದುವಾಗಿತ್ತು.
- ದೇವ್‍ಗಢ್‍ದಲ್ಲಿನ ದಶಾವತಾರ ದೇವಸ್ಥಾನದ ಫಲಕಗಳಂತಹ ಹಿಂದೂ ಕಲೆಯ ಕೆಲವು ಶ್ರೇಷ್ಠ ಕೃತಿಗಳು ಗುಪ್ತರ ಕಲೆಯ ಭವ್ಯತೆಯನ್ನು ವಿವರಿಸಲು ಸಹಾಯಮಾಡುತ್ತವೆ. ಎಲ್ಲಕ್ಕಿಂತ ಮೇಲಾಗಿ ಅಂಶಗಳ ಸಮನ್ವಯವು ಗುಪ್ತರ ಕಲೆಗೆ ಅದರ ವಿಶಿಷ್ಟ ಸೊಗಡನ್ನು ನೀಡಿದವು.
- ಈ ಅವಧಿಯಲ್ಲಿ, ಗುಪ್ತರು ಅಭಿವೃದ್ಧಿ ಹೊಂದುತ್ತಿದ್ದ ಬೌದ್ಧ ಮತ್ತು ಜೈನ ಸಂಸ್ಕೃತಿಗಳನ್ನೂ ಬೆಂಬಲಿಸುತ್ತಿದ್ದರು, ಈ ಕಾರಣಕ್ಕಾಗಿ ಹಿಂದೂಯೇತರ ಗುಪ್ತರ ಕಾಲದ ಕಲೆಯ ದೀರ್ಘ ಇತಿಹಾಸವಿದೆ.
ಮೊದಲನೇ ಕುಮಾರಗುಪ್ತ (ಕ್ರಿ.ಶ. 415– ಕ್ರಿ.ಶ. 455)
- ಎರಡನೇ ಚಂದ್ರಗುಪ್ತನ ನಂತರ ಅವನ ಎರಡನೇ ಮಗ ಮೊದಲನೇ ಕುಮಾರಗುಪ್ತನು ಉತ್ತರಾಧಿಕಾರಿಯಾದನು. ಅವನ ತಾಯಿ ಮಹಾದೇವಿ ಧ್ರುವಸ್ವಾಮಿನಿ. ಕುಮಾರಗುಪ್ತನು ಮಹೇಂದ್ರಾದಿತ್ಯನೆಂಬ ಬಿರುದನ್ನು ಸ್ವೀಕರಿಸಿದನು. ಅವನು ೪೫೫ರ ವರೆಗೆ ಆಳಿದನು.
- ಅವನ ಆಳ್ವಿಕೆಯ ಅಂತ್ಯದ ವೇಳೆಗೆ ನರ್ಮದಾ ಕಣಿವೆಯಲ್ಲಿನ ಒಂದು ಬುಡಕಟ್ಟಾದ ಪುಷ್ಯಮಿತ್ರರು ಅಧಿಕಾರಕ್ಕೆ ಬಂದು ಸಾಮ್ರಾಜ್ಯಕ್ಕೆ ಬೆದರಿಕೆ ಉಂಟುಮಾಡಿದರು.
- ಕುಮಾರಗುಪ್ತನ ಆಳ್ವಿಕೆಯ ಕಾಲದಲ್ಲಿ ಸಂಭಾವ್ಯವಾಗಿ ಕಿದಾರರು ಗುಪ್ತ ಸಾಮ್ರಾಜ್ಯಕ್ಕೆ ಎದುರಾಳಿಗಳಾದರು ಏಕೆಂದರೆ ಕುಮಾರಗುಪ್ತನು ಹುಣರೊಂದಿಗೆ ದಳ್ಳುರಿಗಳನ್ನು ನಿರೂಪಿಸುತ್ತಾನೆ. ಕುಮಾರಗುಪ್ತನು ನಾಲಂದಾ ವಿಶ್ವವಿದ್ಯಾಲಯದ ಸ್ಥಾಪಕನಾಗಿದ್ದನು.
ಸ್ಕಂದಗುಪ್ತ (ಕ್ರಿ.ಶ. 455– ಕ್ರಿ.ಶ. 467)
- ಮೊದಲನೇ ಕುಮಾರಗುಪ್ತನ ಮಗ ಮತ್ತು ಉತ್ತರಾಧಿಕಾರಿಯಾದ ಸ್ಕಂದಗುಪ್ತನನ್ನು ಸಾಮಾನ್ಯವಾಗಿ ಮಹಾನ್ ಗುಪ್ತ ರಾಜರಲ್ಲಿ ಕೊನೆಯವನೆಂದು ಪರಿಗಣಿಸಲಾಗಿದೆ.
- ಅವನು ವಿಕ್ರಮಾದಿತ್ಯ ಮತ್ತು ಕ್ರಮಾದಿತ್ಯ ಎಂಬ ಬಿರುದುಗಳನ್ನು ಸ್ವೀಕರಿಸಿದನು. ಅವನು ಪುಶ್ಯಮಿತ್ರರ ಅಪಾಯವನ್ನು ಭಗ್ನಗೊಳಿಸಿದನು, ಆದರೆ ವಾಯವ್ಯದಿಂದ ದಂಡೆತ್ತಿಬಂದ ಶ್ವೇತ ಹುಣರನ್ನು ಎದುರಾದನು.
- ಕ್ರಿ.ಶ. ೪೫೫ರಲ್ಲಿ ಅವನು ಒಂದು ಹುಣ ಆಕ್ರಮಣವನ್ನು ಹಿಮ್ಮೆಟ್ಟಿಸಿದನು, ಆದರೆ ಯುದ್ಧಗಳ ವೆಚ್ಚಗಳು ಸಾಮ್ರಾಜ್ಯದ ಸಂಪನ್ಮೂಲಗಳನ್ನು ಬರಿದು ಮಾಡಿದವು ಮತ್ತು ಅದರ ಪತನಕ್ಕೆ ಕೊಡುಗೆ ನೀಡಿದವು.
- ಚಂದ್ರಗುಪ್ತನ ಉತ್ತರಾಧಿಕಾರಿಯಾದ ಸ್ಕಂದಗುಪ್ತನ ಭೀತರಿ ಸ್ತಂಭ ಶಾಸನವು ಶ್ವೇತ ಹುಣರ ಆಕ್ರಮಗಳ ತರುವಾಯ ಗುಪ್ತ ಸಾಮ್ರಾಜ್ಯದ ಹತ್ತಿರದ ನಿರ್ನಾಮವನ್ನು ಸ್ಮರಿಸುತ್ತದೆ. ಶ್ವೇತ ಹುಣರು ಗುಪ್ತ ಸಾಮ್ರಾಜ್ಯದ ಪಶ್ಚಿಮ ಭಾಗವನ್ನು ಪಡೆದುಕೊಂಡರು ಎಂದು ತೋರುತ್ತದೆ.
- ಸ್ಕಂದಗುಪ್ತನು ೪೬೭ರಲ್ಲಿ ಮರಣ ಹೊಂದಿದನು ಮತ್ತು ಅವನ ನಂತರ ಅವನ ಪೈತೃಕ ಸಹೋದರ ಪುರುಗುಪ್ತನು ಉತ್ತರಾಧಿಕಾರಿಯಾದನು.
ಸಾಮ್ರಾಜ್ಯದ ಪತನ
- ಸ್ಕಂದಗುಪ್ತನ ಮರಣದ ನಂತರ, ಸಾಮ್ರಾಜ್ಯವು ಸ್ಪಷ್ಟವಾಗಿ ಪತನ ಹೊಂದುತ್ತಿತ್ತು. ಅವನ ನಂತರ ಪುರುಗುಪ್ತ (೪೬೭-೪೭೩), ಎರಡನೇ ಕುಮಾರಗುಪ್ತ (೪೭೩-೪೭೬), ಬುಧಗುಪ್ತ (೪೭೬-೪೯೫), ನರಸಿಂಹಗುಪ್ತ (೪೯೫-?),ಮೂರನೇ ಕುಮಾರಗುಪ್ತ (೫೩೦-೫೪೦), ವಿಷ್ಣುಗುಪ್ತ (೫೪೦-೫೫೦), ಮತ್ತು ಕಡಿಮೆ ತಿಳಿದಿರುವ ರಾಜರಾದ ವೈನ್ಯಗುಪ್ತ ಹಾಗೂ ಭಾನುಗುಪ್ತರು ಉತ್ತರಾಧಿಕಾರಿಗಳಾದರು.
- ೪೮೦ರ ದಶಕದಲ್ಲಿ ತೋರಮನ ಮತ್ತು ಮಿಹಿರಕುಲರ ನೇತೃತ್ವದಲ್ಲಿ ಹುಣರು ವಾಯವ್ಯದಲ್ಲಿ ಗುಪ್ತರ ರಕ್ಷಣೆಯನ್ನು ಭೇದಿಸಿದರು, ಮತ್ತು ೫೦೦ರ ವೇಳೆಗೆ ವಾಯವ್ಯದಲ್ಲಿ ಸಾಮ್ರಾಜ್ಯದ ಹೆಚ್ಚಿನ ಭಾಗ ಹುಣರಿಂದ ಧ್ವಂಸವಾಗಿತ್ತು
- ಸಾಮ್ರಾಜ್ಯವು ತೋರಮನ ಮತ್ತು ಅವನ ಉತ್ತರಾಧಿಕಾರಿ ಮಿಹಿರಕುಲನ ಆಕ್ರಮಣಗಳಿಂದ ಭಾಗಗಳಾಗಿ ಒಡೆದುಹೋಯಿತು. ಅವರ ಅಧಿಕಾರ ಬಹಳ ಕ್ಷೀಣವಾಗಿದ್ದರೂ ಹುಣರನ್ನು ಪ್ರತಿರೋಧಿಸುವುದನ್ನು ಮುಂದುವರಿಸಿದರು ಎಂದು ಗುಪ್ತರ ಶಾಸನಳಿಂದ ತೋರುತ್ತದೆ. ಹುಣ ಆಕ್ರಮಣಕಾರ ತೋರಮನನನ್ನು ಭಾನುಗುಪ್ತನು ೫೧೦ರಲ್ಲಿ ಸೋಲಿಸಿದನು.
- ಗುಪ್ತ ಸಾಮ್ರಾಟ ನರಸಿಂಹಗುಪ್ತ ಮತ್ತು ಮಾಲ್ವಾದ ರಾಜ ಯಶೋಧರ್ಮನ್‍ರ ಮೈತ್ರಿಕೂಟವು ಹುಣರನ್ನು ೫೨೮ರಲ್ಲಿ ಸೋಲಿಸಿ ಭಾರತದಿಂದ ಹೊರಗೋಡಿಸಿದರು.
- ೬ನೇ ಶತಮಾನದ ಗುಪ್ತರ ಅನುಕ್ರಮ ಉತ್ತರಾಧಿಕಾರ ಸಂಪೂರ್ಣವಾಗಿ ಸ್ಪಷ್ಟವಿಲ್ಲ, ಆದರೆ ವಿಷ್ಣುಗುಪ್ತನು ರಾಜವಂಶದ ಮುಖ್ಯ ಕುಲದ ಅಂತ್ಯದ ಗುರುತಿಸಲ್ಪಟ್ಟ ರಾಜನಾಗಿದ್ದನು ಮತ್ತು ೫೪೦ ರಿಂದ ೫೫೦ರ ವರೆಗೆ ಆಳಿದನು.
- ಹುಣರ ಆಕ್ರಮಣದ ಜೊತೆಗೆ, ವಾಕಾಟಕರಿಂದ ಪೈಪೋಟಿ ಮತ್ತು ಮಾಲ್ವಾದಲ್ಲಿ ಯಶೋಧರ್ಮನ್‍ನ ಉದಯ ಸಾಮ್ರಾಜ್ಯದ ಪತನಕ್ಕೆ ಕೊಡುಗೆ ನೀಡಿದ ಅಂಶಗಳಾಗಿವೆ.
No comments:
Post a Comment